ರಾಜ್ಯದಲ್ಲಿ ಬಿಸಿಲಿನ ತಾಪ 40°C ದಾಟಲಿದೆ!:
ಕರ್ನಾಟಕ ರಾಜ್ಯದಲ್ಲಿ ಹಲವೆಡೆ ಬಿಸಿಲು ಹಾಗೂ ಬಹಳಷ್ಟು ಕಡೆಗಳಲ್ಲಿ ಮಳೆಯ ವಾತಾವರಣ ಇದ್ದು…..ಸೂರ್ಯನ ತಾಪಮಾನ ಎಚ್ಚಾಗುತ್ತಿದ್ದು ಬಹಳಷ್ಟು ಜನರಿಗೆ ತಮ್ಮ – ತಮ್ಮ ಮನೆಯ ಹೊರಗೆ ಹೋಗಲು ಭಯ ಪಡುತ್ತಾರೆ…ಬಹಳಷ್ಟು ರೈತರಿಗೆ ತಮ್ಮ – ತಮ್ಮ ಹೊಲದಲ್ಲಿ ನೀರು ಇಲ್ಲದೆ ಹಾಗೂ ಬಿಸಿಲು ಜಾಸ್ತಿ ಇದ್ದು ಅವರ – ಅವರ ಬೆಳೆಯಲ್ಲಿ ನಷ್ಟವಾಗುತ್ತಿದೆ…ಆದರೆ ಈಗ ಹವಾಮಾನ ಇಲಾಖೆಯು ಮುಂದಿನ ದಿನಗಳಲ್ಲಿ ಮಳೆಯ ಸಾಧ್ಯತೆ ಜಾಸ್ತಿ ಇರುತ್ತದೆ ಎಂದು ತಿಳಿಸಿದ್ದಾರೆ..,,

ರಾಜ್ಯಾದ್ಯಂತ ಮುಂದಿನ ಕೆಲವು ದಿನಗಳಲ್ಲಿ ಹವಾಮಾನದಲ್ಲಿ ಮಹತ್ವದ ಬದಲಾವಣೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ 5 ದಿನಗಳ ಕಾಲ ಬಹುತೇಕ ಜಿಲ್ಲೆಗಳಲ್ಲಿ ಒಣಹವೆಯ ಜೊತೆಗೆ ಬಿಸಿಲಿನ ತಾಪ ಹೆಚ್ಚಾಗುವ ಸಾಧ್ಯತೆ ಇದೆ….
ಹವಾಮಾನ ತಜ್ಞರ ಪ್ರಕಾರ, ಈ ಮೋಡ ಕವಿದ ವಾತಾವರಣವು ಕೆಲ ಭಾಗಗಳಲ್ಲಿ ತಾತ್ಕಾಲಿಕ ತಂಪನ್ನು ನೀಡಬಹುದು. ಆದರೆ, ಈ ತಂಪು ದೀರ್ಘಕಾಲ ಇರಲಾರದು ಎಂದು ಹೇಳಲಾಗಿದೆ.
ಇನ್ನು ಇಂದಿನಿಂದ ಮಾ.18ರವರೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಮಲೆನಾಡು ಭಾಗಗಳಲ್ಲಿ ಈ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ತಾಪ ಮುಂದುವರಿಯಲಿದ್ದು, ಗರಿಷ್ಠ ತಾಪಮಾನ ಸುಮಾರು 36 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಲಾಗಿದೆ.
ಈ ಪ್ರದೇಶಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚು ಇರುವುದರಿಂದ ಜನರು ಹೆಚ್ಚು ನೀರು ಕುಡಿಯುವುದು, ಹಗುರವಾದ ಬಟ್ಟೆ ಧರಿಸುವುದು ಮತ್ತು ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸುವುದು ಉತ್ತಮ.
ಕರಾವಳಿ ಪ್ರದೇಶಗಳಾದ ಮಂಗಳೂರು, ಉಡುಪಿ ಮತ್ತು ಕಾರವಾರಗಳಲ್ಲಿ ತಾಪಮಾನ ಸ್ವಲ್ಪ ಕಡಿಮೆ ಇದ್ದರೂ, ತೇವಾಂಶ ಹೆಚ್ಚಿರುವುದರಿಂದ ಬಿಸಿಲಿನ ಅನುಭವ ಹೆಚ್ಚು ಆಗಬಹುದು. ಈ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ ಸುಮಾರು 31 ರಿಂದ 33 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಸುತ್ತಮುತ್ತ ದಾಖಲಾಗಲಿದೆ.
ಮಲೆನಾಡು ಪ್ರದೇಶಗಳಾದ ಮಡಿಕೇರಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ತಾಪಮಾನ ಇತರ ಪ್ರದೇಶಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಇರುತ್ತದೆ. ಇಲ್ಲಿ ಗರಿಷ್ಠ ತಾಪಮಾನ 33 ರಿಂದ 34 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಮಟ್ಟದಲ್ಲಿ ದಾಖಲಾಗುವ ಸಾಧ್ಯತೆ ಇದೆ.
ಇನ್ನು ರಾಜ್ಯದ ಇತರ ಪ್ರಮುಖ ನಗರಗಳ ಹವಾಮಾನವನ್ನು ಗಮನಿಸಿದರೆ, ಮೈಸೂರು, ಮಂಡ್ಯ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಮಟ್ಟದಲ್ಲಿ ಇರಲಿದೆ.
ಒಟ್ಟಿನಲ್ಲಿ ನೋಡಿದರೆ, ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದು ಸ್ಪಷ್ಟವಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಮಾತ್ರ ಮಳೆಯ ಚಾನ್ಸ್ ಇದೆ.
ಪ್ರಮುಖ ನಗರಗಳ ತಾಪಮಾನ
ಬೆಂಗಳೂರು: 36°C / 22°C
ಮಂಗಳೂರು: 33°C / 27°C
ಮೈಸೂರು: 37°C / 22°C
ಬೆಳಗಾವಿ: 37°C / 23°C
ಬಳ್ಳಾರಿ: 39°C / 27°C
ರಾಯಚೂರು: 40°C / 29°C
ಯಾದಗಿರಿ: 40°C / 29°C
ಕಲಬುರಗಿ: 40°C / 29°C