Airport Jobs 2026: 10th / PUC ಪಾಸ್‌ಗೆ 2,442 ಹುದ್ದೆಗಳು – ₹35,000 ವೇತನ, ಫ್ರೆಶರ್‌ಗಳಿಗೆ ಸುವರ್ಣಾವಕಾಶ!

Airport Jobs 2026:

ಕರ್ನಾಟಕದ ಬಹಳಷ್ಟು ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗ ಇಲ್ಲದವರಿಗೆ…ಈಗ ಏರ್ಪೋರ್ಟ್ನಲ್ಲಿ (ವಿಮಾನ ನಿಲ್ದಾಣದಲ್ಲಿ) 2,442 ಉದ್ಯೋಗ….ಬಾಕಿ ಇದ್ದ ಕಾರಣ ಏರ್ಪೋರ್ಟ್ ನಲ್ಲಿ ಉದ್ಯೋಗವನ್ನು ಉಡುಕುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಲು ಇದು ಒಂದು ಅದ್ಬುತ ಅವಕಾಶ…ಯಾರಿಗೆಲ್ಲ ಏರ್ಪೋರ್ಟ್ನಲ್ಲಿ ಗ್ರೌಂಡ್ ಸ್ಟಾಫ್ ಮತ್ತು ಕಾರ್ಗೊ ಈ ಉದ್ಯೋಗದಲ್ಲಿ ಆಸಕ್ತಿ ಇರುವವರಿಗೆ ಈ ಉದ್ಯೋಗಕ್ಕೆ ಅರ್ಜಿಯನ್ನು ಸಲ್ಲಿಸಬಹುದು….

 

 

 

Airport Careers have diverse range of opportunities

ನೋಯ್ಡಾದ ಜೇವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉದ್ಯೋಗದ ದೊಡ್ಡ ಅವಕಾಶಗಳು ತೆರೆಯಲ್ಪಟ್ಟಿವೆ. ದೇಶದ ಪ್ರಮುಖ ಏವಿಯೇಷನ್ ಯೋಜನೆಗಳಲ್ಲಿ ಒಂದಾದ ಈ ವಿಮಾನ ನಿಲ್ದಾಣವು ತನ್ನ ಕಾರ್ಯಾಚರಣೆ ಆರಂಭಿಸಲು ಸಿದ್ಧವಾಗುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ಒಟ್ಟು 2,442 ಹುದ್ದೆಗಳ ನೇಮಕಾತಿ ಪ್ರಕಟಿಸಲಾಗಿದೆ.

ಈ ನೇಮಕಾತಿಯ ವಿಶೇಷತೆ ಏನೆಂದರೆ, ಹೆಚ್ಚಿನ ಹುದ್ದೆಗಳಿಗೆ ಯಾವುದೇ ವಿಶೇಷ ಏವಿಯೇಷನ್ ಡಿಪ್ಲೊಮಾ ಅಥವಾ ತರಬೇತಿ ಅಗತ್ಯವಿಲ್ಲ. 10ನೇ ತರಗತಿ ಮತ್ತು ಪಿಯುಸಿ ಪಾಸಾದವರು ಕೂಡ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿಯಲ್ಲಿ ಪ್ರಮುಖವಾಗಿ ಮೂರು ವಿಧದ ಹುದ್ದೆಗಳಿವೆ — ಗ್ರೌಂಡ್ ಸ್ಟಾಫ್, ಕಾರ್ಗೋ ಎಕ್ಸಿಕ್ಯೂಟಿವ್ ಮತ್ತು ಲೋಡರ್.

ಗ್ರೌಂಡ್ ಸ್ಟಾಫ್ ಮತ್ತು ಕಾರ್ಗೋ ಎಕ್ಸಿಕ್ಯೂಟಿವ್ ಹುದ್ದೆಗಳು:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ ಪಿಯುಸಿ (12ನೇ ತರಗತಿ) ಪಾಸಾಗಿರಬೇಕು. 18 ರಿಂದ 30 ವರ್ಷದೊಳಗಿನ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಈ ಹುದ್ದೆಗಳಲ್ಲಿ ಕೆಲಸ ಮಾಡುವವರಿಗೆ ತಿಂಗಳಿಗೆ ₹25,000 ರಿಂದ ₹35,000 ವರೆಗೆ ವೇತನ ನೀಡಲಾಗುತ್ತದೆ.

ಲೋಡರ್ ಹುದ್ದೆ:
 ತಿಂಗಳಿಗೆ ₹15,000 ರಿಂದ ₹25,000 ವರೆಗೆ ವೇತನ ನಿಗದಿಯಾಗಿದೆ. ಲೋಡರ್ ಹುದ್ದೆಯಲ್ಲಿ ಸಾಮಾನ್ಯವಾಗಿ ಸರಕುಗಳನ್ನು ಲೋಡ್/ಅನ್‌ಲೋಡ್ ಮಾಡುವ ಕೆಲಸಗಳು ಇರುತ್ತವೆ.

 ಫ್ರೆಶರ್‌ಗಳಿಗೆ ದೊಡ್ಡ ಅವಕಾಶ

 ಕೆಲಸದ ಅನುಭವವಿಲ್ಲದ ಅಭ್ಯರ್ಥಿಗಳು ಸಹ ಯಾವುದೇ ಆತಂಕವಿಲ್ಲದೆ ಅರ್ಜಿ ಹಾಕಬಹುದು. ಏವಿಯೇಷನ್ ಕ್ಷೇತ್ರದಲ್ಲಿ ತಮ್ಮ ಕರಿಯರ್ ಆರಂಭಿಸಲು ಬಯಸುವವರಿಗೆ ಇದು ಒಂದು ಬೃಹತ್ ವೇದಿಕೆಯಾಗಿದೆ.

 ವೇತನ ಮತ್ತು ಸೌಲಭ್ಯಗಳು

ಈ ಹುದ್ದೆಗಳ ವೇತನವು ಇತರ ಸಾಮಾನ್ಯ ಪ್ರೈವೇಟ್ ಉದ್ಯೋಗಗಳಿಗಿಂತ ಉತ್ತಮವಾಗಿದೆ. ₹15,000 ರಿಂದ ₹35,000 ವರೆಗೆ ವೇತನ ನೀಡಲಾಗುತ್ತಿದ್ದು, ಅನುಭವ ಮತ್ತು ಹುದ್ದೆಯ ಆಧಾರದ ಮೇಲೆ ಹೆಚ್ಚಾಗುವ ಸಾಧ್ಯತೆಯೂ ಇದೆ.

ಅರ್ಜಿ – ವಿಧಾನ

ಆಸಕ್ತ ಅಭ್ಯರ್ಥಿಗಳು ಜೂನ್ 15, 2026 ರೊಳಗೆ ಅಧಿಕೃತ ವೆಬ್‌ಸೈಟ್ www.niasjewar.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆ ಸರಳವಾಗಿದ್ದು, ಅಭ್ಯರ್ಥಿಗಳು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಬಳಸಿ ನೋಂದಣಿ ಮಾಡಿಕೊಳ್ಳಬೇಕು.

ಅರ್ಜಿಯನ್ನು ಸಲ್ಲಿಸುವಾಗ ಕೆಳಗಿನ ಮಾಹಿತಿಗಳು ಅಗತ್ಯವಾಗಿರುತ್ತವೆ:

  • ಪಾಸ್ಪೋರ್ಟ್ ಸೈಜ್ ಫೋಟೋ
  • ಸಹಿ (Signature)
  • ಮೂಲ ಶಿಕ್ಷಣದ ವಿವರಗಳು

ಅರ್ಜಿಯನ್ನು ಸರಿಯಾಗಿ ತುಂಬಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ ಮಾತ್ರ ಸಬ್ಮಿಟ್ ಮಾಡಬೇಕು.

 

Leave a Comment