Army Recruitment 2026:
ಭಾರತೀಯ ಸೇನೆಗಳು ಒಬ್ಬ ಮಾನವನ ದೇಶ ಪ್ರೇಮ್ಮವನು ಹಾಗೂ ಸೇವೆಯನ್ನು ನೀಡಲು ಒಂದು ಉತ್ತಮ ಅವಕಾಶವಾಗಿದೆ ….ಇದಕ್ಕಾಗಿಯೇ ಭಾರತೀಯ ಸೇನೆ ಸೇರಲು ಟ್ಯುಟೋರಿಯಲ್ ಆರ್ಮಿ ಹುದ್ದೆಗೆ ಸೇರಲು ಇದು ಒಂದು ಸುವರ್ಣ ಅವಕಾಶ…ಅದರಿಂದ ಈ ಉದ್ಯೋಗಕ್ಕೆ ಸೇರಲು ಆಸಕ್ತಿ ಇದ್ದವರೂ ಈ ಉದ್ಯೋಗಕ್ಕೆ ಸೇರಬಹುದು
ನೀವು ಕೂಡ ಸೇನೆ ಸೇರಬೇಕು ಎಂದು ಕನಸು ಕಾಣುತ್ತಿದ್ದರೆ, ಇದೀಗ ನಿಮ್ಮಿಗೆ ದೊಡ್ಡ ಅವಕಾಶ ಬಂದಿದೆ. ಭಾರತೀಯ ಟೆರಿಟೋರಿಯಲ್ ಆರ್ಮಿ (TA) 2026 ನೇಮಕಾತಿಯಡಿ ಒಟ್ಟು 3,806 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಇದು ದೇಶ ಸೇವೆಗೆ ಮುಂದಾಗುವ ಯುವಕರಿಗೆ ಅತ್ಯಂತ ಮಹತ್ವದ ಅವಕಾಶವಾಗಿದೆ.
ಈ ನೇಮಕಾತಿ ಪ್ರಕ್ರಿಯೆಯ ವಿಶೇಷತೆ ಎಂದರೆ ಇದು ಸಂಪೂರ್ಣವಾಗಿ ನೇರ ರ್ಯಾಲಿಗಳ ಮೂಲಕ ನಡೆಯುತ್ತದೆ. ಈಗಾಗಲೇ ಮಾರ್ಚ್ 2026 ರಿಂದ ದೇಶದ ವಿವಿಧ ಭಾಗಗಳಲ್ಲಿ ನೇಮಕಾತಿ ರ್ಯಾಲಿಗಳು ಆರಂಭವಾಗಿದ್ದು, ಆಗಸ್ಟ್ 2026ರವರೆಗೆ ಮುಂದುವರಿಯಲಿವೆ. ಕೆಲವು ಸಂದರ್ಭಗಳಲ್ಲಿ ಈ ಪ್ರಕ್ರಿಯೆ ಸೆಪ್ಟೆಂಬರ್ ವರೆಗೆ ವಿಸ್ತರಿಸುವ ಸಾಧ್ಯತೆಯೂ ಇದೆ.
ಅಮೃತಸರ, ಜೈಪುರ, ದೆಹಲಿ ಮತ್ತು ಮೀರತ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಈ ರ್ಯಾಲಿಗಳು ನಡೆಯಲಿವೆ. ಆದ್ದರಿಂದ ಅಭ್ಯರ್ಥಿಗಳು ತಮ್ಮ ಹತ್ತಿರದ ರ್ಯಾಲಿ ಕೇಂದ್ರದ ಮಾಹಿತಿ ಪಡೆದು, ಅದಕ್ಕೆ ಅನುಗುಣವಾಗಿ ಸಿದ್ಧತೆ ಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.
ಅರ್ಹತೆ
- ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ 10ನೇ ತರಗತಿಯಲ್ಲಿ 45% ಅಂಕಗಳನ್ನು ಹೊಂದಿರಬೇಕು.
- ಸೋಲ್ಜರ್ ಕ್ಲರ್ಕ್ ಹುದ್ದೆಗೆ 12ನೇ ತರಗತಿಯಲ್ಲಿ ಕನಿಷ್ಠ 60% ಅಂಕಗಳಿರಬೇಕು ಮತ್ತು ಇಂಗ್ಲಿಷ್ ಹಾಗೂ ಗಣಿತ ವಿಷಯಗಳಲ್ಲಿ ಉತ್ತಮ ಜ್ಞಾನ ಇರಬೇಕು.
- ಟ್ರೇಡ್ಸ್‌ಮನ್ ಹುದ್ದೆಗೆ 8ನೇ ಅಥವಾ 10ನೇ ತರಗತಿ ಪಾಸಾದವರಿಗೂ ಅವಕಾಶ ಇದೆ.
ಅಭ್ಯರ್ಥಿಗಳ ವಯಸ್ಸು 18 ರಿಂದ 42 ವರ್ಷಗಳೊಳಗಿರಬೇಕು.
ಆಯ್ಕೆ ಪ್ರಕ್ರಿಯೆ
ಮೊದಲ ಹಂತದಲ್ಲಿ ದೈಹಿಕ ಫಿಟ್ನೆಸ್ ಪರೀಕ್ಷೆ ನಡೆಯುತ್ತದೆ. ಇದರಲ್ಲಿ ಓಟ ಮತ್ತು ಪುಲ್-ಅಪ್‌ಗಳು ಪ್ರಮುಖವಾಗಿವೆ. ಅಭ್ಯರ್ಥಿಗಳು 1 ಮೈಲಿ ಓಟವನ್ನು ಪೂರ್ಣಗೊಳಿಸಬೇಕು. ವಿಶೇಷವಾಗಿ 5 ನಿಮಿಷ 30 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿದವರಿಗೆ ಹೆಚ್ಚಿನ ಅಂಕಗಳನ್ನು ನೀಡಲಾಗುತ್ತದೆ. ಒಟ್ಟು ದೈಹಿಕ ಪರೀಕ್ಷೆಗೆ 100 ಅಂಕಗಳನ್ನು ನಿಗದಿಪಡಿಸಲಾಗಿದೆ.
ದೈಹಿಕ ಪರೀಕ್ಷೆಯ ನಂತರ ಲಿಖಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳು ನಡೆಯುತ್ತವೆ.
ದೈಹಿಕ ಅರ್ಹತೆ
- ಕನಿಷ್ಠ ಎತ್ತರ: 160 ಸೆಂ.ಮೀ
- ಕನಿಷ್ಠ ತೂಕ: 50 ಕೆಜಿ
ಈ ಮಾನದಂಡಗಳನ್ನು ಪೂರೈಸುವುದು ಕಡ್ಡಾಯವಾಗಿದೆ.
ವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ಸಂಬಳದ ಜೊತೆಗೆ ಸರ್ಕಾರಿ ಸೌಲಭ್ಯಗಳೂ ಲಭ್ಯವಿರುತ್ತವೆ.
- ತಿಂಗಳಿಗೆ ₹15,500 ರಿಂದ ₹69,400 ವರೆಗೆ ಸಂಬಳ
- ಡಿಎ (DA), ಎಚ್‌ಆರ್‌ಎ (HRA), ಪಿಎಫ್ (PF) ಸೇರಿದಂತೆ ಇತರ ಭತ್ಯೆಗಳು
ಅರ್ಜಿ ಶುಲ್ಕ
- General / OBC / EWS ವರ್ಗದವರಿಗೆ: ₹100
- SC / ST ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕ ಇಲ್ಲ