UPSC Free Coaching 2027: ಉಚಿತ ವಸತಿ ಸಹಿತ ತರಬೇತಿ – ಬೆಂಗಳೂರು ಸೇರಿ 13 ನಗರಗಳಲ್ಲಿ ಪ್ರವೇಶ ಪರೀಕ್ಷೆ!

UPSC Free Coaching 2027

UPSC ಪರೀಕ್ಷೆಯನ್ನು ಬರೆಯಲು ಆಸಕ್ತಿ ಇದ್ದವರಿಗೆ ಸಂತಸದ ವಿಷಯ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳ ತಯಾರಿಗಾಗಿ ಉಚಿತ ವಸತಿ ಸಹಿತ ತರಬೇತಿಯನ್ನು ನೀಡುವುದು ಮಾತ್ರವಲ್ಲ ಉತ್ತಮ ಅಂಕಗಳನ್ನು ಗಳಿಸಲು ಬೇಕಾಗುವ ಎಲ್ಲ ತಯಾರಿಗಳು ಅವರೇ ನಿಮಗೆ ನೀಡಿ ಪರೀಕ್ಷೆಗೆ ತಯಾರಿಯನ್ನು ಮಾಡುತ್ತಾರೆ.. . ಆದ್ದರಿಂದ ಯಾರಿಗೆಲ್ಲ ಈ ಪರೀಕ್ಷೆ ಬೆರೆಯಲು ಆಸಕ್ತಿ ಇದೇ ಅವರು ಈ ಅವಕಾಶವನ್ನು ಗಳಿಸಲು ಈ ಮೂಲಕ ತಿಳಿಸುತ್ತೇವೆ..

UPSC aspirants ಗೆ ಇದು ದೊಡ್ಡ ಅವಕಾಶ!
ನೀವು UPSC 2027 ಪರೀಕ್ಷೆಗೆ ಸಿದ್ಧತೆ ಮಾಡ್ತಿದ್ದೀರಾ? ಆದರೆ coaching ಖರ್ಚು, ವಸತಿ ಸಮಸ್ಯೆ, ಅಥವಾ ಉತ್ತಮ ಮಾರ್ಗದರ್ಶನ ಸಿಗುತ್ತಿಲ್ಲವೆಂದು ಯೋಚಿಸುತ್ತಿದ್ದರೆ ದೆಹಲಿಯ ಪ್ರಸಿದ್ಧ Jamia Millia Islamia (JMI) ವಿಶ್ವವಿದ್ಯಾಲಯವು UPSC ಅಭ್ಯರ್ಥಿಗಳಿಗಾಗಿ ಉಚಿತ ವಸತಿ ಸಹಿತ ಸಮಗ್ರ ತರಬೇತಿ ಕಾರ್ಯಕ್ರಮವನ್ನು ಘೋಷಿಸಿದೆ.


ಕರ್ನಾಟಕ ಅಭ್ಯರ್ಥಿಗಳಿಗೆ ಸುವಾರ್ತೆ

ಈ ಕಾರ್ಯಕ್ರಮದ ಪ್ರಮುಖ ವಿಶೇಷತೆ ಎಂದರೆ, ಪ್ರವೇಶ ಪರೀಕ್ಷೆಯನ್ನು ದೇಶದ 13 ಪ್ರಮುಖ ನಗರಗಳಲ್ಲಿ ನಡೆಸಲಾಗುತ್ತಿದೆ. ಇದು ವಿಶೇಷವಾಗಿ ಗ್ರಾಮೀಣ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲಕರ.


ಯಾರು ಈ ಉಚಿತ ತರಬೇತಿಗೆ ಅರ್ಹರು?

  • ಅಲ್ಪಸಂಖ್ಯಾತ ಸಮುದಾಯದವರು
  • ಪರಿಶಿಷ್ಟ ಜಾತಿ (SC) ಅಭ್ಯರ್ಥಿಗಳು
  • ಪರಿಶಿಷ್ಟ ಪಂಗಡ (ST) ಅಭ್ಯರ್ಥಿಗಳು
  • ಮಹಿಳಾ ಅಭ್ಯರ್ಥಿಗಳು

 ಪ್ರಮುಖ ದಿನಾಂಕಗಳೂ

 ಕೆಳಗಿನ ದಿನಾಂಕಗಳನ್ನು ಗಮನದಲ್ಲಿಟ್ಟುಕೊಳ್ಳಿ:

  • ಅರ್ಜಿ ಪ್ರಾರಂಭ ದಿನಾಂಕ: ಏಪ್ರಿಲ್ 1, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 26, 2026
  • ಪ್ರವೇಶ ಪರೀಕ್ಷೆ ದಿನಾಂಕ: ಜೂನ್ 6, 2026
  • ಅಂತಿಮ ಫಲಿತಾಂಶ ಪ್ರಕಟಣೆ: ಆಗಸ್ಟ್ 7, 2026
  • ತರಗತಿಗಳ ಆರಂಭ: ಸೆಪ್ಟೆಂಬರ್ 1, 2026

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

 ಪತ್ರಿಕೆ 1 – ಸಾಮಾನ್ಯ ಅಧ್ಯಯನ (GS):

  • 60 Objective ಪ್ರಶ್ನೆಗಳು
  • 1/3 Negative Marking

 ಪತ್ರಿಕೆ 2 – ಪ್ರಬಂಧ (Essay):

  • 2 ಪ್ರಬಂಧಗಳನ್ನು ಬರೆಯಬೇಕು
  • ಮೊದಲ ಹಂತದಲ್ಲಿ Top 900 ಬಂದ ಅಭ್ಯರ್ಥಿಗಳ ಮೌಲ್ಯಮಾಪನ ಮಾಡಲಾಗುತ್ತದೆ

ಸಂದರ್ಶನ (Interview):

  • 30 ಅಂಕಗಳ ಅಂತಿಮ ಹಂತ

 ಅರ್ಜಿ ಸಲ್ಲಿಸುವ ವಿಧಾನ

ಆಸಕ್ತ ಅಭ್ಯರ್ಥಿಗಳು Jamia Millia Islamia ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

APPLY LINK

 

Leave a Comment