BAN vs NZ: ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶದ ಐತಿಹಾಸಿಕ ಟೆಸ್ಟ್ ಜಯ – ಶಾಂಟೋ ನಾಯಕತ್ವದ ಮ್ಯಾಜಿಕ್!

BAN vs NZ

ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಭರ್ಜರಿ ಪ್ರದರ್ಶನ ನೀಡುತ್ತಾ 150 ರನ್‌ಗಳಿಂದ ಜಯ ಸಾಧಿಸಿ ಇತಿಹಾಸ ನಿರ್ಮಿಸಿದೆ. ಈ ಜಯದೊಂದಿಗೆ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿರುವ ಬಾಂಗ್ಲಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿಯೂ ಮಹತ್ವದ ಅಂಕಗಳನ್ನು ಗಳಿಸಿದೆ.

ಬಾಂಗ್ಲಾದೇಶದ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ತಂಡದ ವಿರುದ್ಧ ನಡೆದ ಈ ಪಂದ್ಯ ರೋಚಕ ತಿರುವುಗಳನ್ನು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 310 ರನ್ ಕಲೆಹಾಕಿತು. ಮಹಮ್ಮದುಲ್ ಹಸನ್ ಜಾಯ್ 86 ರನ್‌ಗಳ ಪ್ರಮುಖ ಕೊಡುಗೆ ನೀಡಿದರು. ನ್ಯೂಜಿಲೆಂಡ್ ಪರ ಗ್ಲೆನ್ ಫಿಲಿಪ್ಸ್ 4 ವಿಕೆಟ್ ಪಡೆದು ಮೆರೆದರು.

ಇದಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡ 317 ರನ್‌ಗಳಿಗೆ ಆಲೌಟ್ ಆಗಿ ಕೇವಲ 7 ರನ್ ಮುನ್ನಡೆ ಪಡೆದಿತು. ಕೇನ್ ವಿಲಿಯಮ್ಸನ್ 104 ರನ್‌ಗಳ ಶತಕ ಬಾರಿಸಿ ತಂಡವನ್ನು ಮುನ್ನಡೆಸಿದರೆ, ಡೆರಿಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಉತ್ತಮ ಸಹಕಾರ ನೀಡಿದರು. ಬಾಂಗ್ಲಾ ಪರ ತೈಜುಲ್ ಇಸ್ಲಾಂ 4 ವಿಕೆಟ್ ಪಡೆದು ಗಮನ ಸೆಳೆದರು.

ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕ ನಜ್ಮುಲ್ ಹೊಸೈನ್ ಶಾಂಟೋ ಶತಕ (105 ರನ್) ಬಾರಿಸಿ ತಂಡವನ್ನು ಬಲಿಷ್ಠ ಸ್ಥಿತಿಗೆ ತಂದು ನಿಲ್ಲಿಸಿದರು. ಜೊತೆಗೆ ಮೊಮಿನುಲ್ ಹಕ್ 67 ರನ್ ಮತ್ತು ಮೆಹೆಂದಿ ಹಸನ್ 50 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರು. ಇದರೊಂದಿಗೆ ಬಾಂಗ್ಲಾದೇಶ 338 ರನ್‌ಗಳಿಗೆ ಆಲೌಟ್ ಆಗಿ ನ್ಯೂಜಿಲೆಂಡ್‌ಗೆ 332 ರನ್ ಗುರಿ ನೀಡಿತು.

ಈ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ತೈಜುಲ್ ಇಸ್ಲಾಂ ಮಾರಕ ಬೌಲಿಂಗ್ ದಾಳಿಗೆ ಕಿವೀಸ್ ತಂಡ ತತ್ತರಿಸಿ ಕೇವಲ 181 ರನ್‌ಗಳಿಗೆ ಆಲೌಟ್ ಆಯಿತು. ತೈಜುಲ್ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದು ಪಂದ್ಯವನ್ನು ಬಾಂಗ್ಲಾದೇಶದ ಕಡೆಗೆ ತಿರುಗಿಸಿದರು.

ಈ ಗೆಲುವಿನೊಂದಿಗೆ ಬಾಂಗ್ಲಾದೇಶ ತಂಡ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಜಯ ಸಾಧಿಸಿದೆ. ಇದುವರೆಗೆ ನಡೆದ 10 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಮೇಲುಗೈ ಸಾಧಿಸಿದ್ದರೂ, ಈ ಬಾರಿ ಶಾಂಟೋ ನಾಯಕತ್ವದಲ್ಲಿ ಬಾಂಗ್ಲಾ ತಂಡ ಇತಿಹಾಸ ಬರೆದಿದೆ

 

Leave a Comment